Monday, December 13, 2010

Vishnu Sahasranama 807-810

ವಿಷ್ಣು ಸಹಸ್ರನಾಮ :
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ
807) ಮಹಾಹ್ರದಃ
'ಹ್ರದ' ಎಂದರೆ ಅತ್ಯಂತ ದೊಡ್ಡ ಸರೋಹರ, ಅಂದರೆ ಕಡಲು. ಜಗತ್ತಿನಲ್ಲಿ ಸಮುದ್ರಗಳನ್ನು ನಿರ್ಮಿಸಿ ಅದರಲ್ಲಿ ಸನ್ನಿಹಿತನಾಗಿರುವ ಭಗವಂತ ಮಹಾಹ್ರದಃ. ಪ್ರಳಯಕಾಲದಲ್ಲಿ ಪ್ರಳಯ ಸಮುದ್ರದಲ್ಲಿ ಪವಡಿಸಿರುವ ಅನಂತಶಯನ ಭಗವಂತ ಮಹಾಹ್ರದಃ.
808) ಮಹಾಗರ್ತಃ
'ಗರ್ತ' ಎಂದರೆ ಗುಹೆ ಅಥವಾ ಕಣಿವೆ(valleys). ಜಗತ್ತಿನ ಮಹಾಗರ್ತ ನಮ್ಮ ಹೃದಯ ಗುಹೆ, ಇಂತಹ  ಮಹಾ ಕಣಿವೆಯಲ್ಲಿ ನೆಲೆಸಿರುವ ಹೃತ್ಕಮಲ ಮದ್ಯನಿವಾಸಿ ಭಗವಂತ ಮಹಾಗರ್ತಃ    
809) ಮಹಾಭೂತಃ
ಯಾವುದು ಎಲ್ಲಾ ಕಾಲದಲ್ಲಿ ಶಾಶ್ವತವಾಗಿರುತ್ತದೋ ಅದು ಮಹಾಭೂತ.ಕಾಲಾತೀತನಾದ, ಸರ್ವೋನ್ನತನಾದ  ಭಗವಂತ ಮಹಾಭೂತಃ
810) ಮಹಾನಿಧಿಃ
ಭಗವಂತ ನಮ್ಮ ಹೃದಯಗುಹೆಯಲ್ಲಿ ಅಡಗಿರುವ ಮಹಾನ್ ಸಂಪತ್ತು. ಆತನಿಗಿಂತ ಹಿರಿದಾದ ನಿಧಿ ಇನ್ನೊಂದಿಲ್ಲ. ಬಾಹ್ಯ ಪ್ರಪಂಚದ ಹಣದ ಆಸೆಯಿಂದ ಜೀವನವನ್ನು ವ್ಯರ್ಥ ಮಾಡಿಕೊಳ್ಳುವ ಬದಲು, ನಮ್ಮೊಳಗಿರುವ ಕೊಪ್ಪರಿಗೆ  'ಮಹಾನಿಧಿಃ' ಭಗವಂತನನ್ನು ತಿಳಿದರೆ ನಮ್ಮ ಜೀವನ ಸಾರ್ಥಕ. 

No comments:

Post a Comment