Wednesday, December 22, 2010

Vishnu Sahasranama 967-975

ವಿಷ್ಣು ಸಹಸ್ರನಾಮ :
ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ
967) ಭೂರ್ಭುವಃಸ್ವಸ್ತರುಃ
ಭೂಃ+ಭುವಃ+ಸುವಃ+ಸ್ತರುಃ; ಈ ನಾಮವನ್ನು ನಾಲ್ಕು ನಾಮವಾಗಿ ಕಾಣಬಹುದು.  ಭೂಮಿ,ಆಕಾಶ ಹಾಗು ಸ್ವರ್ಗದಲ್ಲಿ ತುಂಬಿ ನಿಂತಿರುವ ಭಗವಂತನ ವಿಶ್ವ ರೂಪದ ವಿರಾಟ ಸ್ವರೂಪದ ಕಲ್ಪನೆಯನ್ನು ಈ ನಾಮ ಕೊಡುತ್ತದೆ. ಭೂಮಿ ಆಕಾಶ ಹಾಗು ಸ್ವರ್ಗದಲ್ಲಿ ತುಂಬಿರುವ, ಜ್ಞಾನಾನಂದದಿಂದ ಪರಿಪೂರ್ಣನಾದ  ಭಗವಂತ ನಮ್ಮನ್ನು ಸಂಸಾರ ಸಾಗರದಿಂದ ಪಾರು ಮಾಡುವವನು.     
968) ತಾರಃ
ಎಲ್ಲರನ್ನೂ ಸಂಸಾರ ದುಃಖದಿಂದ, ಸಮಸ್ಯೆಯಿಂದ ಪಾರುಮಾಡುವ, ಸಂಸಾರದಿಂದ ದಾಟಿಸಿ ನಮಗೆ ಸಂಪೂರ್ಣವಾದ ಸ್ವರೂಪಾನಂದವನ್ನು ಕೊಡುವ ಭಗವಂತ ತಾರಃ.
969) ಸವಿತಾ
ಸೂರ್ಯನಾರಾಯಣನಲ್ಲಿ ಸನ್ನಿಹಿತನಾಗಿರುವ ಗಾಯತ್ರಿಪ್ರತಿಪಾಧ್ಯ ಭಗವಂತ ಈ ಜಗತ್ತನ್ನು ಹೆತ್ತ ತಂದೆ. ಈ ಲೋಕದ ತಂದೆಯೂ-ತಾಯಿಯೂ ಅವನೇ .
970) ಪ್ರಪಿತಾಮಹಃ
ಎಲ್ಲರಿಗೂ ಮೂಲ ಕಾರಣನಾದ ಭಗವಂತ ಜಗದ ಮುತ್ತಜ್ಜ.  
971) ಯಜ್ಞಃ
ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ, ಯಜ್ಞದ ಅಂತರ್ಯಾಮಿ.  
972) ಯಜ್ಞಪತಿಃ
ಯಜ್ಞಗಳ ಸ್ವಾಮಿ ಹಾಗು ಪಾಲಕ ಭಗವಂತ ಯಜ್ಞಪತಿಃ. ಯಜ್ಞವನ್ನು ಸ್ವೀಕರಿಸಿ ಫಲ ಕೊಡುವವನು.
973) ಜ್ವಾ
ನಮ್ಮಿಂದ ಯಜ್ಞ ಮಾಡಿಸುವ ಭಗವಂತ ಜ್ವಾ. ಯಜ್ಞ ಮಾಡುವ ಯಜಮಾನನೊಳಗೆ ಅಂತರ್ಯಾಮಿಯಾಗಿದ್ದು ಯಜ್ಞ ಮಾಡಿಸುವವನೂ ಅವನೇ!
974) ಯಜ್ಞಾಂಗಃ
ಯಜ್ಞದಲ್ಲಿ ಬಳಸುವ ಹವಿಸ್ಸುಗಳನ್ನು ತನ್ನ ಅಂಗಗಳಿಂದ ಸೃಷ್ಟಿಸಿದ ಭಗವಂತ ಯಜ್ಞಾಂಗಃ.
975) ಯಜ್ಞವಾಹನಃ
ಯಜ್ಞವನ್ನು ವಾಹನವಾಗಿಸಿಕೊಂಡು ಬರುವವ. ಏಲ್ಲಿ ಯಜ್ಞ ನೆಡೆಯುತ್ತಿರುತ್ತದೋ ಅಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಇಲ್ಲಿ ಯಜ್ಞ ಅಂದರೆ ಅಗ್ನಿ ಮುಖೇನ ಮಾಡುವ ಯಜ್ಞ ಮಾತ್ರ ಅಲ್ಲ, ಜ್ಞಾನಯಜ್ಞ ಕೂಡಾ ಒಂದು ವಿಶಿಷ್ಟವಾದ ಯಜ್ಞ,    

No comments:

Post a Comment