ಕ್ಷೇತ್ರಜ್ಞೋಕ್ಷರ->ಕ್ಷೇತ್ರಜ್ಞ+ಅಕ್ಷರ ಎರಡು ನಾಮ
16)ಕ್ಷೇತ್ರಜ್ಞ ಅಂದರೆ
ಕ್ಷೇತ್ರವನ್ನು ತಿಳಿದವನು. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಈ ಬ್ರಹ್ಮಾಂಡದಲ್ಲಿ(ಚತುರ್ಮುಖನ ಕ್ಷೇತ್ರ) ಮತ್ತು ಜೀವದ ನೆಲೆ ಶರೀರ (ನಮ್ಮ ಕ್ಷೇತ್ರ).
ಕ್ಷೇತ್ರಜ್ಞ ಅಂದರೆ ,ಈ ಬ್ರಹ್ಮಾಂಡವನ್ನು ಮತ್ತು ಈ ಶರೀರವನ್ನು ,ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ ತಿಳಿದವನು.
17)ಅಕ್ಷರ
ಅಕ್ಷರ ಅಂದರೆ ನಾಶವಿಲ್ಲದ್ದು ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಧ್ವನಿಮುದ್ರಿತ ಆಗಿ ಶಾಶ್ವತವಾಗಿ ಇರುತ್ತದೆ.
೧. ಅಕ್ಷರ ಅಂದರೆ ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence)೨>ಕ್ಷರ ಅಂದರೆ ನಾಶ, ಅ+ಕ್ಷರ =>ನಾಶವಿಲ್ಲದ್ದು
೩. ಕ್ಷರಣ ಅಂದರೆ => ಸುರಿಸುವವನು. ಅಕ್ಷರ ಅಂದರೆ ಯುಗ ಯುಗಾಂತರದಲ್ಲಿ ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು.
೪. ಅಕ್ಷ ಅಂದರೆ ಇಂದ್ರಿಯ,ರ =>ರಮಣ ಅಂದರೆ ರಮಿಸುವವನು. ಅಕ್ಷ+ರ =>ಅಕ್ಷರ ಅಂದರೆ ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು
೫. ಅಕ್ಷರ ಅಂದರೆ ಅ ನಿಂದ ಕ್ಷ ವರೆಗೆ ಇರುವ ಎಲ್ಲಾ ವರ್ಣಗಳಿಂದ ಉತ್ಪನ್ನವಾಗುವ ಅನಂತಾನಂತ ಶಬ್ದಗಳಲ್ಲಿ ರಮಿಸುವವನು.
೬. ಅ => ಅಲ್ಲ/ಇಲ್ಲ -ಭಗವಂತ ಅಲ್ಲ , ಭಗವಂತ ಇಲ್ಲ !!! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.
No comments:
Post a Comment