Sunday, December 12, 2010

Vishnu sahasranama 777-780

ವಿಷ್ಣು ಸಹಸ್ರನಾಮ:
ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ
777) ಸಮಾವರ್ತಃ
ಸಮಾವರ್ತಃ ಎಂದರೆ ಸಂಸಾರ ಚಕ್ರ ತಿರುಗಿಸುವವನು. ಈ ಜಗತ್ತಿನ ಕೇಂದ್ರ ಬಿಂದು ಧ್ರುವಮಂಡಲದ ಸಮೀಪವಿದೆ.ಇಲ್ಲಿ 'ಶಿಂಶುಮಾರ' ರೂಪದಲ್ಲಿ ನಿಂತು, ನಿಯಮಿತವಾಗಿ, ಗಣಿತಬದ್ಧವಾಗಿ ಪ್ರಪಂಚವನ್ನು, ಗ್ರಹ-ಗೊಲವನ್ನು ತಿರುಗಿಸುತ್ತಿರುವ ಚಕ್ರಧಾರಿ ಭಗವಂತ ಸಮಾವರ್ತಃ. ಭಗವಂತ ಕೇಂದ್ರಬಿಂದುವಿನಲ್ಲಿ ನಿಂತು ಪ್ರಪಂಚವನ್ನು ತಿರುಗಿಸುವುದಲ್ಲದೆ, ತಾನೂ ಕೂಡಾ ಪ್ರತಿಯೊಂದು ವಸ್ತುವಿನಲ್ಲಿ ನೆಲಸಿ ತಿರುಗುತ್ತಿದ್ದಾನೆ. 
778) ಅನಿವೃತ್ತಾತ್ಮಾ(ನಿವೃತ್ತಾತ್ಮಾ)
ನಿರಂತರವಾಗಿ ಈ ಸಂಸಾರ ಚಕ್ರವನ್ನು ತಿರುಗಿಸುತ್ತಿರುವ ಭಗವಂತ ಯಾವುದೇ ರೀತಿಯ ಮೋಹ(attachment) ಇಲ್ಲದ ನಿವೃತ್ತಾತ್ಮಾ. ಆದರೆ ಮೋಹವಿಲ್ಲದೆ ಎಲ್ಲವನ್ನು ನಿಯಮಿತವಾಗಿ ಮಾಡುವ ನಿವೃತ್ತಾತ್ಮಾ.
779) ದುರ್ಜಯಃ
ಜಯ ಎಂದರೆ ಒಂದು ಅರ್ಥದಲ್ಲಿ ಇನ್ನೊಬ್ಬರನ್ನು ಸೋಲಿಸುವುದು, ಇನ್ನೊಂದು ಅರ್ಥದಲ್ಲಿ ವರ್ತನೆಯಲ್ಲಿ ಎತ್ತರದಲ್ಲಿರುವುದು. ಒಂದು ಪಡೆಯುವುದು, ಇನ್ನೊಂದು ಇರುವುದು(Greatness). ಭಗವಂತ ಎಲ್ಲರಿಂದ ಎತ್ತರದಲ್ಲಿರುವವ. ಆತನನ್ನು ಮೀರಿ ಮೇಲಕ್ಕೆ ಹೋಗುವುದು ಅಸಾಧ್ಯ.      
780) ದುರತಿಕ್ರಮಃ
ಇಡೀ ಜಗತ್ತು ಭಗವಂತನ ಅಂಕೆಯಲ್ಲಿದೆ. ಅವನ ಅಣತಿಯನ್ನು ಮೀರಿ ಯಾರೂ ಮೇಲಕ್ಕೆ ಹೋಗಲಾರರು. ಅವನನ್ನು ಮೀರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ. 

No comments:

Post a Comment