Sunday, December 12, 2010

Vishnu Sahasranama 790-793

ವಿಷ್ಣು ಸಹಸ್ರನಾಮ:
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ
790) ಇಂದ್ರಕರ್ಮಾ
ಸಂಸ್ಕೃತದಲ್ಲಿ 'ಇಂದ್ರ' ಎಂದರೆ ಸರ್ವ ಸಮರ್ಥ ಎನ್ನುವ ಅರ್ಥವಿದೆ. ಯಾವುದೇ ಕರ್ಮವನ್ನು ಮಾಡಬೇಕಾದರೂ ಅದರ ಹಿಂದೆ ಸರ್ವ ಸಾಮರ್ಥ್ಯ ಅಗತ್ಯ. ಭಗವಂತನ   ಕೈಯಿಂದ ಆಗದೆ ಇರುವ ಯಾವ ಕೆಲಸವೂ ಇಲ್ಲ, ಆತ ಸರ್ವ ಕರ್ಮಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯವುಳ್ಳ ಇಂದ್ರಕರ್ಮಾ
791) ಮಹಾಕರ್ಮಾ
ಈ ಜಗತ್ತಿನಲ್ಲಿ ಎಲ್ಲಾ ಶ್ರೇಷ್ಠ ಕರ್ಮ ಮಾಡುವವನು ಹಾಗು ಮಾಡಿಸುವವನು ಆದ ಭಗವಂತ ಮಹಾಕರ್ಮಾ.
792) ಕೃತಕರ್ಮಾ
ಕ್ರತಕೃತ್ಯನಾದವನು ಕೃತಕರ್ಮಾ.ಭಗವಂತ ಮಾಡಬೇಕಾದ ಯಾವುದೇ ಕರ್ಮ ಬಾಕಿ ಇಲ್ಲ. ಆದರೂ ಸಹ ಆತ ಈ ಪ್ರಪಂಚವನ್ನು ನಡೆಸುವ ಮಹಾ ಕರ್ಮವನ್ನು ನಿರಂತರ ಮಾಡುತ್ತಿರುತ್ತಾನೆ.
793) ಕೃತಾಗಮಃ
'ಆಗಮ' ಎಂದರೆ 'ಶಾಸ್ತ್ರ' ಎನ್ನುವ ಅರ್ಥವನ್ನು ಕೊಡುತ್ತದೆ.  ಸಮಸ್ತ ಶಾಸ್ತ್ರಗಳ ಸೃಷ್ಟಿಕರ್ತ ಭಗವಂತ ಕೃತಾಗಮಃ. ನಮ್ಮ ಜೀವನದ ನೆಡೆಗೆ ಬೇಕಾದ ನೀತಿ ಸಂಹಿತೆ ಕೊಟ್ಟವನು ಭಗವಂತ.  ಇಷ್ಟೇ ಅಲ್ಲದೆ 'ಆಗಮ' ಎನ್ನುವುದಕ್ಕೆ  ಫಲಿಸುವುದು ಅಥವಾ ಕೈಗೂಡುವುದು ಎನ್ನುವ ಅರ್ಥ ಕೂಡಾ ಇದೆ. ಭಗವಂತ ಮಾಡುವ ಸರ್ವ ಕರ್ಮವೂ ಕೂಡಾ ಫಲವನ್ನೀಯುತ್ತದೆ, ಆದ್ದರಿಂದ ಆತ ಕೃತಾಗಮಃ.

1 comment:

  1. ಗುರುಗಳಿಗೆ ಸಾಷ್ಟಾಂಗ ನಮನ. ಬಹಳ ದಿನಗಳಿಂದ ಹುಡುಕುತ್ತಿದ್ದ ಸಾವಿರದ ನಾಮ ಇಂದು ಸಿಕ್ಕಿತು. ಧನ್ಯವಾದಗಳು

    ReplyDelete