Sunday, December 12, 2010

Vishnu Sahasranama 794-798

ವಿಷ್ಣು ಸಹಸ್ರನಾಮ:
ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ
794) ಉದ್ಭವಃ
ಉತ್+ಭವ; ಇಲ್ಲಿ ಉತ್ ಎಂದರೆ ಉತ್ಕೃಷ್ಟವಾದ ಎಂದರ್ಥ. ಆದ್ದರಿಂದ ಯಾವ ದೋಷವೂ ಇಲ್ಲದ ಅತ್ಯಂತ ಉತ್ಕೃಷ್ಟವಾದ ಇರುವಿಕೆ(ಭವ) ಉಳ್ಳ, ಹುಟ್ಟಿರದ ಭಗವಂತ ಉದ್ಭವಃ. ಎಲ್ಲವುದರ ಒಳಗಿದ್ದು ಪ್ರತಿಯೊಂದಕ್ಕೂ ಉತ್ಕೃಷ್ಟವನ್ನು ಕೊಟ್ಟವ ಆ ಭಗವಂತ. 
795) ಸುಂದರಃ
ಭಗವಂತ ಸೌಂದರ್ಯದ ಖನಿ. ಅವನು ಸೌಂದರ್ಯದ ಪರಾಕಾಷ್ಠೆ.
796) ಸುಂದಃ
'ಸು' ಎಂದರೆ ಆನಂದ. ಸುಖವನ್ನೀಯುವವನು ಹಾಗು ದಾರಿತಪ್ಪಿದಾಗ ಸುಖದ ದಾರಿಯನ್ನು ಮುಚ್ಚುವ ಭಗವಂತ ಸುಂದಃ.
797) ರತ್ನನಾಭಃ
ಆನಂದವೆಂಬ ಮುತ್ತು ಸುರಿಯುವ ಹೊಕ್ಕುಳುಳ್ಳವನು ರತ್ನನಾಭಃ. ಈ ವಿಶ್ವವೆಂಬ ಆನಂದದ ಬುಗ್ಗೆ ಭಗವಂತನ ನಾಭಿಯಿಂದ ಚಿಮ್ಮಿ ಸೃಷ್ಟಿಯಾಯಿತು. ಇಂತಹ ಮಹಾರತ್ನವನ್ನು ನಾಭಿಯಿಂದ ಸೃಷ್ಟಿಸಿದ ಭಗವಂತ ರತ್ನನಾಭಃ.
798) ಸುಲೋಚನಃ
ಭಗವಂತ
ಚಲುಣ್ಣಿನವನು ಆತ ಪ್ರತಿಯೊಂದನ್ನೂ ಸಮರ್ಪಕವಾಗಿ ಆಲೋಚಿಸಿ ಮಾಡುವ ಸುಲೋಚನಃ. ನಮ್ಮ ದೇಹದಲ್ಲಿ ಸೌಂದರ್ಯದ ಕೇಂದ್ರ  'ಕಣ್ಣು'.  ನಮಗೆ ಸೌಂದರ್ಯವನ್ನು ಕೊಟ್ಟವನು ಹಾಗು ಇತರ ಇಂದ್ರಿಯಗಳಿಗಿಂತ ಅತೀ ಭಿನ್ನವಾದ ಸವಲತ್ತನ್ನು ಕಣ್ಣಿಗೆ ಕೊಟ್ಟ ಕಮಲ ನಯನ ಭಗವಂತ ಸುಲೋಚನಃ.

No comments:

Post a Comment