ವಿಷ್ಣು ಸಹಸ್ರನಾಮ:
ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರನಿ ಸೂದನಃ
826) ನ್ಯಗ್ರೋಧಃ
ಆಲದ ಮರದಲ್ಲಿ ಸನ್ನಿಹಿತನಾಗಿರುವ ಭಗವಂತ ನ್ಯಗ್ರೋಧಃ.
827) ಉದುಂಬರಃ
ಅತ್ತಿಯ ಮರದಲ್ಲಿ ವಿಶೇಷತಃ ಸನ್ನಿಹಿತನಾದ ಭಗವಂತ ಉದುಂಬರಃ.
828) ಅಶ್ವತ್ಥಃ
ಅರಳಿಯಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಅಶ್ವತ್ಥಃ.
829) ಚಾಣೂರಾಂಧ್ರನಿಸೂದನಃ
ಚಾಣೂರನೆಂಬ ರಾಕ್ಷಸನನ್ನು ಕೊಂದವ,ಅಜ್ಞಾನದಲ್ಲಿ ಸುಖವನ್ನು ಕಾಣುವವರನ್ನು ಮುಗಿಸುವವನು, ಕುರುಡಲ್ಲಿ ಜನಿಸಿದ ಅಜ್ಞಾನಿಗಳಾದ ದುರ್ಯೋಧನಾದಿಗಳನ್ನು ಮುಗಿಸಿದ ಭಗವಂತ ಚಾಣೂರಾಂಧ್ರನಿಸೂದನಃ.
No comments:
Post a Comment