Sunday, December 12, 2010

Vishnu sahasranama 781-785

ವಿಷ್ಣು ಸಹಸ್ರನಾಮ:
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ
781) ದುರ್ಲಭಃ
ಭಗವಂತ ಎಲ್ಲಾ ಕಡೆ ಇದ್ದರೂ ಕೂಡಾ ಆತನನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಆತ ದುರ್ಲಭಃ.
782) ದುರ್ಗಮಃ
ಭಗವಂತನನ್ನು ಸುಲಭವಾಗಿ ತಿಳಿಯುವುದು ಕಷ್ಟ. ಆತ ನಮ್ಮ ಇಂದ್ರಿಯಗಳಿಗೆ ಎಟುಕಲಾರ ಆತ ದುರ್ಗಮಃ. ಆತನನ್ನು ತಿಳಿಯಬೇಕಾದರೆ ನಾವು ನಮ್ಮ ಹೊರಪ್ರಪಂಚವನ್ನು ಬಿಟ್ಟು ಒಳಪ್ರಪಂಚದಿಂದ ಸಾಧನೆ ಮಾಡಬೇಕು. 
783) ದುರ್ಗಃ
ಭಗವಂತ   ಅಜ್ಞಾನಿಗಳಿಗೆ ಎಂದೂ ದಕ್ಕುವುದಿಲ್ಲ. ಆತ ಅಜ್ಞಾನಿಗಳು ಲಗ್ಗೆ ಹೊಡೆಯಲಾಗದ ಕೋಟೆ.
784) ದುರಾವಾಸಃ
ಸುಲಭವಾಗಿ ಧ್ಯಾನಕ್ಕೆ ಸಿಗದ ಭಗವಂತ ದುರಾವಾಸಃ. ಮಹಾನ್ ಸಂತರಿಗೂ ಕೂಡಾ ಭಗವಂತ ಕಾಣಿಸುವುದು ಕೇವಲ ಕೆಲವು ಕ್ಷಣಗಳು ಮಾತ್ರ .'ಅ'ಕಾರವನ್ನು ಉಚ್ಛಾರ ಮಾಡಲು ಬೇಕಾಗುವ ಸಮಯದ ನಾಲ್ಕನೇ ಒಂದು ಭಾಗದಷ್ಟು ಸಮಯ ಭಗವಂತನ ದರ್ಶನವಾದರೆ ಅದೇ ಮಹಾ ಪುಣ್ಯ. 
785) ದುರಾರಿಹಾ
ಕೆಟ್ಟ ದಾರಿ ಹಿಡಿದ ದುಷ್ಟರನ್ನು ಕೆಡಹುವ ಭಗವಂತ ದುರಾರಿಹಾ. ನಮ್ಮೊಳಗಿದ್ದು ನಮ್ಮ ಸುತ್ತಮುತ್ತಿಗೆ ಹಾಕುವ ಕೆಟ್ಟ ಶಕ್ತಿಗಳಾದ ಕಾಮ-ಕ್ರೋದ, ಅಜ್ಞಾನ-ಅಸೂಯೆ-ಅಹಂಕಾರಗಳಿಂದ ನಮ್ಮನ್ನು ಬಿಡಿಸಬಲ್ಲ ಭಗವಂತ ದುರಾರಿಹಾ.

No comments:

Post a Comment