ವಿಷ್ಣು ಸಹಸ್ರನಾಮ:
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ
786) ಶುಭಾಂಗಃ
ಭಗವಂತ ಸರ್ವಾಂಗ ಮಂಗಳಮೂರ್ತಿ. ದೋಷ ದುರ್ಗುಣದ ಸ್ಪರ್ಶ ಅವನಿಗಿಲ್ಲ. ಹೆಜ್ಜೆ-ಹೆಜ್ಜೆಗೂ ಕೆಟ್ಟ ದಾರಿ ಹಿಡಿಯುವ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಆ ಶುಭಾಂಗಃನಲ್ಲಿ ಶರಣಾಗಬೇಕು.
787) ಲೋಕಸಾರಂಗಃ
ಲೋಕದಲ್ಲಿ ವಸ್ತು 'ಸಾರ'ವಾಗಲು ಕಾರಣ ಭಗವಂತ. ಆತ ನಮ್ಮೊಳಗಿದ್ದರೆ ಸಾರ, ಇಲ್ಲದಿದ್ದರೆ ನಿಸ್ಸಾರ. ನಮಗೆ ಸಾರಭೂತವಾದದ್ದನ್ನು ಗ್ರಹಿಸುವ ಶಕ್ತಿಕೊಡುವ ಭಗವಂತ ಲೋಕಸಾರಂಗಃ.
788) ಸುತಂತುಃ
ಇಡೀ ಜಗತ್ತು ಒಂದಕ್ಕೊಂದು ಹೆಣೆದುಕೊಂಡು ನಿಯತಬದ್ಧವಾಗಿ ನಿಲ್ಲುವಂತೆ 'ನಿಯತಿಯ' ಹಗ್ಗದ ಬಲೆ ನೇಯ್ದ ಭಗವಂತ ಸುತಂತುಃ. 'ತಂತು' ಎಂದರೆ ಸಂತತಿ, ಬ್ರಹ್ಮಾದಿ ದೇವತೆಗಳೆಂಬ ಶ್ರೇಷ್ಠ ಸಂತತಿಯುಳ್ಳ ಭಗವಂತ ಸುತಂತುಃ.
789) ತಂತುವರ್ಧನಃಸಂತತಿಯನ್ನು ಬೆಳೆಸುವವನು ಹಾಗು ಸಂಹರಿಸುವವನು ತಂತುವರ್ಧನಃ. ನಮ್ಮೊಳಗೆ ಸ್ನೇಹದ, ಪ್ರೀತಿಯ ಅಂಕುರವನ್ನು ಬಿತ್ತಿ ಸಂಸಾರವನ್ನು ಬೆಳೆಸುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಸಂಹಾರ ಮಾಡುತ್ತಾನೆ.
No comments:
Post a Comment