Saturday, November 13, 2010

vishnu sahasranama 528-532

ವಿಷ್ಣು ಸಹಸ್ರನಾಮ:  ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ
528) ಆನಂದಃ
ಯಾವುದೇ ಹೊರಗಿನ ಸಂಗತಿಯಿಲ್ಲದೆ ಒಳಗಿನ ಆತ್ಮಸ್ವರೂಪ ಖುಷಿಪಡುವುದು ಆನಂದ. ಭಗವಂತ ಆನಂದದ ಕಡಲು, ನಮ್ಮ ಆನಂದ ಆ ಆನಂದದ ಒಂದು ಕಿಡಿ ಅಷ್ಟೇ. ಅಪರಂಪಾರವಾದ ಸ್ವರೂಪಾನಂದದ ಕಡಲಾದ ಭಗವಂತ ಆನಂದಃ. 
529) ನಂದನಃ
ವಸುದೇವಾದಿಗಳಿಗೊಲಿದು ಮಗನಾಗಿ ಬಂದವನು; ಸಂತಸವನ್ನೀಯುವವನು;ಒಬ್ಬ ವ್ಯಕ್ತಿಯ ಪೂರ್ಣತೆಗೆ ಏನು ಬೇಕು ಅದೆಲ್ಲವೂ ಪರಿಪೂರ್ಣವಾಗಿ ತುಂಬಿದ್ದು ನಮ್ಮನ್ನು ಪೂರ್ಣತೆಯತ್ತ ಕೊಂಡೊಯ್ಯುವ ಶಕ್ತಿ ನಂದನಃ.  
530) ನಂದಃ
ನಂದಃ ಎಂದರೆ ಪೂರ್ಣಃ. ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣತೆಯನ್ನೀಯುವವನು ಹಾಗು ಭಕ್ತರಿಗೆ ಸಂತಸವನ್ನೀಯುವ ಭಗವಂತ ನಂದಃ.
531) ಸತ್ಯಧರ್ಮಾ
ಜಗತ್ತಿನಲ್ಲಿ ವೈವಿಧ್ಯವನ್ನು ಸೃಷ್ಟಿಸಿದ  ಸತ್ಯಕರ್ಮನಾದ  ಭಗವಂತನ ಗುಣಕ್ರಿಯೆ ಎಲ್ಲವೂ ಸತ್ಯ ಸ್ವರೂಪ. ಸತ್ಯ ಆತನ ಧರ್ಮ. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ ಹಾಗು ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಯಾರ ಧರ್ಮವೋ ಅವನು ಸತ್ಯಧರ್ಮಾ.     
532) ತ್ರಿವಿಕ್ರಮಃ
ಮೂರು ಕಾಲದಲ್ಲಿ (ಭೂತ-ವರ್ತಮಾನ-ಭವಿಷ್ಯತ್), ಮೂರು ಲೋಕಗಳಲ್ಲಿ(ಭೂರ್ಭುವಃ ಸ್ವಃ) ತುಂಬಿ ಸಮಸ್ತ ವೇದ ವಾಚ್ಯನಾಗಿ(ಋಗ್ವೇದ-ಯಜುರ್ವೇದ-ಸಾಮವೇದ) ಮೂರು ವಿಧದ ಜೀವರನ್ನು (ಸಾತ್ವಿಕರು-ರಾಜಸರು-ತಾಮಸರು), ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ) ನಿಯಂತ್ರಿಸುವ ಹಾಗು ರಕ್ಷಿಸುವ ಭಗವಂತ ತ್ರಿವಿಕ್ರಮಃ.  

No comments:

Post a Comment