Monday, November 8, 2010

Vishnusahasranama 492-495

ವಿಷ್ಣು ಸಹಸ್ರನಾಮ: ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ 
492) ಆದಿದೇವಃ
ಎಲ್ಲಕ್ಕಿಂತ ಮೊದಲು ಇರುವವ; ಈ ಪ್ರಪಂಚ ಇರುವಾಗಲೂ ಇಲ್ಲದಾಗಲೂ ಇರುವವ ಆದಿದೇವ. ಅನಾದಿನಿತ್ಯವಾದ ಜೀವ ಹಾಗು ಜೀವ ಸ್ವಭಾವಕ್ಕನುಗುಣವಾಗಿ ಭಗವಂತನ ಸೃಷ್ಟಿಯಲ್ಲಿ ಜೀವದ ಬೆಳವಣಿಗೆಯಾಗುತ್ತದೆ. ಅವನು ಎಲ್ಲಾಕ್ಕೂ ಕಾರಣ ಹಾಗು ಅದು ಅವನಿಗೆ ಒಂದು ಕ್ರೀಡೆ. ಎಲ್ಲಕ್ಕಿಂತ ಎತ್ತರದಲ್ಲಿರುವವನು; ಆದಿಯಿಂದ ಅನಾದಿಕಾಲದವರೆಗೆ ಜಗತ್ತಿನ
ಎಲ್ಲಾ ವ್ಯವಹಾರವನ್ನು ನೆಡೆಸತಕ್ಕಂತಹ, ಎಲ್ಲವುದರ ಒಳಗಿದ್ದು ಎಲ್ಲಾ ಕ್ರಿಯೆಗಳನ್ನು ನಡೆಸುವ ಭಗವಂತ ಆದಿದೇವಃ   
493) ಮಹಾದೇವಃ
'ದೇವ' ಎಂದರೆ ದೇವತೆಗಳು. ಈ ಜಗತ್ತಿನ ನಿಯಾಮಕ ಶಕ್ತಿಗಳಾದ ದೇವತೆಗಳಿಗೆ ಹಿರಿದೈವನಾದ ಭಗವಂತ ಮಹಾದೇವಃ 
494) ದೇವೇಶಃ
ಮೇಲೆ ಹೇಳಿದಂತೆ 'ದೇವ' ಎಂದರೆ ದೇವತೆಗಳು; 'ಈಶ' ಎಂದರೆ ಒಡೆಯ. ಸರ್ವ ದೇವತೆಗಳ ಒಡೆಯನಾದ ಭಗವಂತ ದೇವೇಶಃ
 
495) ದೇವಭೃದ್ಗುರುಃ
ಸಮಸ್ತ ದೇವತೆಗಳನ್ನು, ಜ್ಞಾನಿಗಳನ್ನು ಭರಣೆ ಮಾಡಿದ ಭಗವಂತ ಜಗದ್ಗುರು. ಹಾಗಾಗಿ "ಕೃಷ್ಣಂ ಒಂದೇ ಜಗದ್ಗುರುಮ್ " ಎನ್ನುತ್ತಾರೆ. ಭಗವಂತ ಲೋಕಗುರು; ದೇವತೆಗಳಿಗೆ, ಜ್ಞಾನಿಗಳಿಗೆ,ಬ್ರಹ್ಮಾದಿಗಳಿಗೆ,ಶ್ರಿಲಕ್ಷ್ಮಿಗೆ, ಎಲ್ಲರಿಗೂ ಆತ ಗುರು. ಎಲ್ಲಾ ಗುರುವಿನೊಳಗಿದ್ದು ಜ್ಞಾನ ಕೊಡುವವನೂ ಅವನೇ. ಹೀಗೆ ಬ್ರಹ್ಮಾದಿ ದೇವತೆಗಳನ್ನು, ಜ್ಞಾನಿಗಳನ್ನು ಸಲಹುವ ಜಗದ್ಗುರು ಭಗವಂತ
ದೇವಭೃದ್ಗುರುಃ.

No comments:

Post a Comment