Friday, November 19, 2010

Vishnu Sahasranama 605-613

ವಿಷ್ಣು ಸಹಸ್ರನಾಮ: 
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂವರಃ
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ 
605) ಶ್ರೀವತ್ಸವಕ್ಷಾಃ
ಭಗವಂತನ ಬಲಎದೆಯಲ್ಲಿ ಶ್ರೀವತ್ಸ ಮಚ್ಚೆಯಿದೆ. ಇದು ಲಕ್ಷ್ಮಿ ಸ್ವರೂಪ. ಸದಾ ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದ ಭಗವಂತ
ಶ್ರೀವತ್ಸವಕ್ಷಾಃ.   
606) ಶ್ರೀವಾಸಃ
ಯಾರ ಎದೆಯಲ್ಲಿ ಲಕ್ಷ್ಮಿ ಲಕ್ಷಣವಾಗಿ ಕುಳಿತಿದ್ದಾಳೋ ಅವನು ಶ್ರೀವಾಸಃ
607) ಶ್ರೀಪತಿಃ
ಲಕ್ಷ್ಮಿಯ ಪತಿ ಹಾಗು ಸಮಸ್ತ ವೇದಗಳ ಒಡೆಯ ಭಗವಂತ ಶ್ರೀಪತಿಃ.
608) ಶ್ರೀಮತಾಂವರಃ
ಜಗತ್ತಿನಲ್ಲಿರುವ ಶ್ರೀಮಂತರಲ್ಲಿ ಸರ್ವ ಶ್ರೇಷ್ಠ ಶ್ರೀಮಂತ, ಸರ್ವಶ್ರೇಷ್ಠ  ಜ್ಞಾನಿ  ಶ್ರೀಮತಾಂವರಃ
609) ಶ್ರೀದಃ
ಸಿರಿಯನ್ನೀಯುವವನು
610) ಶ್ರೀಶಃ
ಸರ್ವ ಸಿರಿಯ ಸರ್ವ ವೇದದ ಅಧಿಪತಿ
611) ಶ್ರೀನಿವಾಸಃ
ವೇದದಲ್ಲಿ ಸನ್ನಿಹಿತನಾದ, ಲಕ್ಷ್ಮಿಯ ಅಂತರ್ಗತ ಭಗವಂತ 
612) ಶ್ರೀನಿಧಿಃ
ನಮಗೆ ಅಮೂಲ್ಯವಾದ ಐದು ನಿಧಿಯನ್ನು (ಕಣ್ಣು, ಮೂಗು, ಬಾಯಿ, ಕಿವಿ, ಮನಸ್ಸು) ಕರುಣಿಸಿದ ಸಿರಿಯ ನೆಲೆ ಭಗವಂತ ಶ್ರೀನಿಧಿಃ.
613) ಶ್ರೀವಿಭಾವನಃ
ಶ್ರಿದೇವಿಗೂ ಕಾರಣಪುರುಷ, ಜಗತ್ತಿಗೆ ಐದು ಬಗೆಯ ಶ್ರೀಯನ್ನು ಕೊಟ್ಟು ಉದ್ಧಾರ ಮಾಡಿದ ಭಗವಂತ ಶ್ರೀವಿಭಾವನಃ

No comments:

Post a Comment