Thursday, November 18, 2010

Vishnu sahasranama 596-600

ವಿಷ್ಣು ಸಹಸ್ರನಾಮ: ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ
596) ಗೋಹಿತಃ
'ಗೋವು' ಎನ್ನುವ ಪದವನ್ನು ಹಿಂದೆ ಅನೇಕ ಬಾರಿ ವಿಶ್ಲೇಷಿಸಿದ್ದೇವೆ. ಎಲ್ಲಾ ಬಗೆಯಿಂದಲೂ ನಮಗೆ ಉಪಯೋಗಕ್ಕೆ ಬರುವ ವಸ್ತು  ಗೋವು. ಈ ಪದಕ್ಕೆ ಅನೇಕ ಅರ್ಥಗಳಿವೆ, ಸ್ವರ್ಗ, ಸೂರ್ಯ, ಹಸು, ಭೂಮಿ, ನೀರು, ಕಣ್ಣು, ಕೂದಲು, ವೇದ ಇತ್ಯಾದಿ. ನಮಗೆ ಮಾರ್ಗದರ್ಶನ ಮಾಡುವ ವೇದಗಳನ್ನು ನಮಗೆ ಕರುಣಿಸಿದ ವೇದ ವಾಗ್ಮಯ, ಭೂಮಿಗೆ ಹಿತಕಾರಿಯಾದ, ಗುಂಗುರು ಕೂದಲಿನ ಗೋವಳನಾಗಿ, ಎಲ್ಲರಿಗೂ ಹಿತವನ್ನುಂಟು ಮಾಡಿದ ಭಗವಂತ ಗೋಹಿತಃ.
597) ಗೋಪತಿಃ
ಗೋವುಗಳ, ಭೂಮಿಯ, ವೇದದ ಹಾಗು ಸ್ವರ್ಗದ ಒಡೆಯ ಭಗವಂತ ಗೋಪತಿಃ.
598) ಗೋಪ್ತಾ
ತನ್ನನ್ನು ತಾನು ಮುಚ್ಚಿಟ್ಟುಕೊಂಡು ಜಗತ್ತಿನ ರಕ್ಷಣೆ ಮಾಡುವ ಭಗವಂತ ಗೋಪ್ತಾ. ಎಲ್ಲೆಡೆ ಇದ್ದು ಎಲ್ಲರನ್ನೂ ಕಾಪಾಡುವ ಕರುಣಾಮೂರ್ತಿ. 
599) ವೃಷಭಾಕ್ಷಃ
ವೃಷಭ-ಅಕ್ಷ ಅಂದರೆ ಧರ್ಮದ ಮೇಲೆ ಕಣ್ಣಿಟ್ಟು ಅದರ ರಕ್ಷಣೆಗೋಸ್ಕರ ಪದೇ ಪದೇ ಭೂಮಿಗೆ ಅವತಾರ ರೂಪಿಯಾಗಿ ಇಳಿದು ಬರುವವ. ಭಗವಂತ ಸ್ವತಃ ಭೂಮಿಗಿಳಿದು ಬರಬಹುದು ಅಥವಾ ಮಹಾ ಪುರುಷರನ್ನು, ಸಾತ್ವಿಕರನ್ನು ಕಳುಹಿಸಬಹುದು. ಅವರೊಳಗೆ ವಿಶೇಷ ಸನ್ನಿಧಾನವನ್ನಿಟ್ಟು ಧರ್ಮ ರಕ್ಷಣೆ ಮಾಡುವ ಭಗವಂತ ವೃಷಭಾಕ್ಷಃ.
600) ವೃಷಪ್ರಿಯಃ
ಧರ್ಮದ ನಡೆಯನ್ನು ಪ್ರೀತಿಸುವ ಭಗವಂತ ವೃಷಪ್ರಿಯಃ.

No comments:

Post a Comment