Friday, November 19, 2010

Vishnu sahasranama 614-623

ವಿಷ್ಣು ಸಹಸ್ರನಾಮ:
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ
614) ಶ್ರೀಧರಃ
ಶ್ರೀಯನ್ನು ಧರಿಸಿದವನು.ಎದೆಯಲ್ಲಿ ಹಾಗು ತೊಡೆಯಲ್ಲಿ ಶ್ರಿಲಕ್ಷ್ಮಿಯನ್ನು ಧರಿಸಿದ ಭಗವಂತ ಸಮಸ್ಥ ವೇದವನ್ನು ಧಾರಣೆ ಮಾಡಿದ ಶ್ರೀಧರಃ.  
615) ಶ್ರೀಕರಃ
ನಮಗೆ ಇಂದ್ರಿಯವನ್ನು, ಜ್ಞಾನ ಸಂಪತ್ತನ್ನು ಕೊಟ್ಟ ಭಗವಂತ ಶ್ರೀಕರಃ.
616) ಶ್ರೇಯಃ
ಭಗವಂತ ಶ್ರೇಯಸ್ಸಿನ ಸ್ವರೂಪ. ಜಗತ್ತಿನ ಪರಮಕಲ್ಯಾಣ ಮಂಗಳ ಸ್ವರೂಪ, ಎಲ್ಲಕ್ಕಿಂತ ಹಿರಿಯ ಹಿತಕಾರಿ ಭಗವಂತ ಶ್ರೇಯಃ
617) ಶ್ರೀಮಾನ್
ಸಿರಿವಂತ; ಅರಿವಿನ ನೆಲೆ.
618) ಲೋಕತ್ರಯಾಶ್ರಯಃ
ಮೂರು ಲೋಕದ ಆಸರೆ; ಬ್ರಹ್ಮಾಂಡವನ್ನು ಧಾರಣೆ ಮಾಡಿದ ಶಕ್ತಿ.


619) ಸ್ವಕ್ಷಃ
ಸು+ಅಕ್ಷ; ದೋಷರಹಿತ ಸ್ವರೂಪಭೂತವಾದ ಕಣ್ಣುಳ್ಳವನು.   
620) ಸ್ವಂಗಃ
ಸು+ಅಂಗಃ; ಭಗವಂತನ ಸಮಸ್ತ ಅಂಗಗಳೂ ಆನಂದಮಯ, ಜ್ಞಾನಮಯ ಹಾಗು ಸುಖ ಸ್ವರೂಪ. 
621) ಶತಾನಂದಃ.
  ಶತ+ಆನಂದ; ಇಲ್ಲಿ ಶತ ಅಂದರೆ ನೂರಾರು ಅಥವಾ ಅನಂತ.  ಅನಂತ ಆನಂದರೂಪಿ ಭಗವಂತ ಶತಾನಂದಃ
622) ನಂದಿಃ.
ಪೂರ್ಣಾನಂದ ಸ್ವರೂಪ.
623) ಜ್ಯೋತಿರ್ಗಣೇಶ್ವರಃ
ಎಲ್ಲಾ ಬೆಳಕುಗಳ ಒಡೆಯ; ಜ್ಞಾನಾನಂದಮಯವಾದ ಬೆಳಕನ್ನು ಕೊಟ್ಟು ನಮ್ಮನ್ನು ಅಜ್ಞಾನ ಪ್ರಪಂಚದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಭಗವಂತ
ಜ್ಯೋತಿರ್ಗಣೇಶ್ವರಃ.

No comments:

Post a Comment