Sunday, November 14, 2010

Vishnusahasranama 550-556

ವಿಷ್ಣು ಸಹಸ್ರನಾಮ:  ವೇಧಾಸ್ಸ್ವಾಂಗೋಜಿತಃ ಕೃಷ್ಣೋ ದೃಢಸ್ಸಂಕರ್ಷಣೋಚ್ಯುತಃ
550) ವೇಧಾಃ 
'ವಿದತ್ತೇ ಇತೀ ವೇದಾಃ'; ವಿಶಿಷ್ಟವಾದ ಧಾರಣೆ ಹಾಗು ಪೋಷಣೆಯನ್ನು ಜಗತ್ತಿಗೆ ಕೊಡುವವನು, ಜಗತ್ತನ್ನು ಹೊರಗಿನಿಂದ ಧಾರಣೆ ಮಾಡಿದ, ಅಂತರಂಗದೊಳಗಿದ್ದು ಅದನ್ನು ಪೋಷಣೆ ಮಾಡುವ ಜಗತ್ತಿನ ಜನಕ.
551) ಸ್ವಾಂಗಃ
ನಮ್ಮ ದೇಹ ಪಂಚಭೂತಗಳಿಂದಾದದ್ದು , ಆದರೆ ಭಗವಂತ ಜ್ಞಾನಾನಂದ ಸ್ವರೂಪಭೂತವಾದ ಅಂಗಾಂಗಗಳುಳ್ಳವನು. ಈ ಕಾರಣದಿಂದ ನಮ್ಮ ಪಾಂಚಬೌತಿಕ ಇಂದ್ರಿಯ ಆತನನ್ನು ಗ್ರಹಿಸಲಾರದು. ಇಂತಹ ಸ್ವರೂಪಭೂತವಾದ ಅಂಗಾಂಗಗಳುಳ್ಳ ಭಗವಂತ ಸ್ವಾಂಗಃ   
552) ಅಜಿತಃ
ಭಗವಂತನನ್ನು ಯಾರೂ ಸೋಲಿಸಲಾರರು ಅವನು ಅಜಿತಃ,  ಆದರೆ ಭಕ್ತ ಪರಾದೀನನಾದ(ಅಹಂ ಭಕ್ತಪರಾದೀನಃ) ಭಗವಂತ ಕೆಲವೊಮ್ಮೆ ಸೋತಂತೆ ತೋರಿಸಿಕೊಳ್ಳುತ್ತಾನೆ. 
553) ಕೃಷ್ಣಃ
'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸ,  ಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯ ಮೂರ್ತಿ ಭಗವಂತ ಕೃಷ್ಣಃ.
ಕೃಷ್ಣ ಎನ್ನುವುದು ಕೃಷಿ+ಣ ಎನ್ನುವ ಎರಡು ಶಬ್ದಗಳ ಸಂಯುಕ್ತ ರೂಪ . ಕೃಷಿ ಎಂದರೆ ಭೂಮಿ, ಕೃಷಿ ಎಂದರೆ ನಿರ್ದೊಶಿತ್ವ. ಭಗವಂತ ದೋಷರಹಿತವಾದ, ಪರಿಶುದ್ಧವಾದ ಅಸ್ಥಿತ್ವವುಳ್ಳ ಭಲಾನಂದಸ್ವರೂಪ.    
554) ದೃಡಃ
ಭಗವಂತನ ವ್ಯಕ್ತಿತ್ವವನ್ನು ಯಾರೂ ಬದಲಿಸಲಾರರು, ಆತ ದೃಡಃ. ಅನಾದಿ ಅನಂತಕಾಲದಲ್ಲಿ ದೃಡವಾದ,  ಏಕರೂಪದ, ಎಂದೂ ಬದಲಾಗದ, ಚಪಲ-ಚಾಂಚಲ್ಯವಿಲ್ಲದ, ನಿಶ್ಚಿತವಾದ  ವ್ಯಕ್ತಿತ್ವವುಳ್ಳ ಭಗವಂತ ದೃಡಃ.
555) ಸಂಕರ್ಷಣಃ
ಸಂಕರ್ಷಣ ಎಂದರೆ ಶೇಷ. ಶೇಷನಲ್ಲಿ ಅಂತರ್ಗತನಾಗಿರುವ ಭಗವಂತ, ಸರ್ವ ಗ್ರಹ-ಗೊಲಗಳನ್ನು ಸೆಳೆದು ಹಿಡಿದಿಟ್ಟ ವಿಶ್ವಧಾರಕ ಶಕ್ತಿ.
556) ಅಚ್ಯುತಃ
ಚ್ಯುತಿ ಇಲ್ಲದೆ, ಅಖಂಡವಾಗಿ ಸೃಷ್ಟಿ-ಸ್ಥಿತಿ-ಸಂಹಾರ ಕಾಲದಲ್ಲಿ ಅನಂತನಾಗಿ ಇರುವ ಭಗವಂತ ಅಚ್ಯುತಃ. ಆತನಿಗೆ ಎಂದೂ ಅಳಿವಿಲ್ಲ.

No comments:

Post a Comment