Tuesday, November 9, 2010

Vishnu sahasranama 496-500

ವಿಷ್ಣು ಸಹಸ್ರನಾಮ:  ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ
496) ಉತ್ತರಃ
ಉತ್ತರ ಎಂದರೆ ಉತ್ಕೃಷ್ಟ, ಎಲ್ಲಕ್ಕಿಂತ ಶ್ರೇಷ್ಠ . ಸರ್ವ ಪ್ರಶ್ನೆಗಳಿಗೆ ಕೊನೆಯ ಉತ್ತರ ಸರ್ವೋ
ತ್ಕೃಷ್ಟನಾದ ಭಗವಂತ ಆದ್ದರಿಂದ ಆತ ಉತ್ತರಃ.
497) ಗೋಪತಿಃ
ಗೋವುಗಳ ಒಡೆಯನಾದ ಭಗವಂತ
ಗೋಪತಿಃ. ಇದು ಮೇಲ್ನೋಟಕ್ಕೆ ಕಾಣುವ ಅರ್ಥ. ಆದರೆ ಸಂಸ್ಕೃತದಲ್ಲಿ ಗೋವು  ಎನ್ನುವುದಕ್ಕೆ  ಭೂಮಿ, ಕಿರಣ, ಸೂರ್ಯ, ಚಂದ್ರ, ಸ್ವರ್ಗ, ಹಸು, ವಾಕ್, ವೇದ, ಹೀಗೆ ಅನೇಕ ಅರ್ಥಗಳಿವೆ.  ಆದ್ದರಿಂದ  ಗೋಪತಿಃ ಎಂದರೆ ಭೂಮಿಯ ಹಾಗು ಸ್ವರ್ಗದ ಒಡೆಯ; ವಾಕ್ಪತಿ; ಸಮಸ್ತ ವೇದವಿಧ್ಯೆಗಳ ಒಡೆಯ.   
498) ಗೋಪ್ತಾ
ಗೋಪ್ತಾ ಎಂದರೆ ಸಲಹುವವನು. ತನ್ನನ್ನು ತಾನು ಅಗಿಸಿಕೊಳ್ಳುವವನು, ಬಾಹ್ಯ ದೃಷ್ಟಿಗೆ, ದುಷ್ಟರಿಗೆ ಕಾಣದ ಭಗವಂತ ಕೇವಲ ಭಕ್ತಿಪೂರ್ವಕವಾದ ಒಳಗಣ್ಣಿಗೆ ಮಾತ್ರ ಗೋಚರಿಸಬಲ್ಲ.    
499) ಜ್ಞಾನಗಮ್ಯಃ
ಅರಿವಿನ ಮೂಲಕ ಮಾತ್ರವೇ  ಪಡೆಯಬಹುದಾದವನು. ಭಗವಂತನನ್ನು ತಿಳಿದರೆ ಮಾತ್ರ ಆತನನ್ನು ಸೇರಲು ಸಾಧ್ಯ. ಆತನನ್ನು ತಿಳಿಯುವ ಏಕಮಾತ್ರ ಸಾಧನ ಅರಿವು. ಆದ್ದರಿಂದ ಭಗವಂತ 
ಜ್ಞಾನಗಮ್ಯಃ.  
500) ಪುರಾತನಃ
ಈ ನಾಮ ಆದಿದೇವ ಎನ್ನುವ ನಾಮದ ಅರ್ಥವನ್ನೇ ಕೊಡುತ್ತದೆ. ಎಲ್ಲಕ್ಕಿಂತ ಮೊದಲಿದ್ದ ಭಗವಂತ
ಪುರಾತನಃ.

4 comments:

  1. ಸಹಸ್ರನಾಮದ ಮಧ್ಯಭಾಗಕ್ಕೆ ಬಂದಿರುವಿರಿ. ಓದುತ್ತಿರುವ ನಮಗೂ ಸಂತೋಷವಿದೆ.
    ನಿಮಗೆ ಧನ್ಯವಾದಗಳು.

    ReplyDelete
  2. Thank you i am energized to step in next half!

    ReplyDelete