Saturday, November 20, 2010

Vishnu sahasranama 624-627

ವಿಷ್ಣು ಸಹಸ್ರನಾಮ: ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯಃ
624) ವಿಜಿತಾತ್ಮಾ
ಮನಸ್ಸನ್ನು ಗೆದ್ದವನು, ಅಂದರೆ ಸಾದಕ ಯಾರ ಕೃಪೆಯಿಂದ ತನ್ನ ಮನಸ್ಸನ್ನು ಗೆಲ್ಲಬಲ್ಲನೊ ಅವನು ವಿಜಿತಾತ್ಮಾ. 'ಆತ್ಮ' ಎಂದರೆ ಜೀವಗಳು;  ಎಲ್ಲಾ ಜೀವರನ್ನು ಗೆದ್ದ ಭಗವಂತ, ಯಾರನ್ನು ಸ್ವೀಕಾರ ಮಾಡುತ್ತಾನೋ ಅವನ ಮನಸ್ಸು ಮಾತ್ರ ಭಗವಂತನೆಡೆಗೆ ಹರಿಯುತ್ತದೆ.  
625) ವಿಧೇಯಾತ್ಮಾ (ವಿಧೇಯಾತ್ಮಾ)
ಎರಡು ರೂಪದಲ್ಲಿ ಈ ನಾಮವನ್ನು ನೋಡಬಹುದು. ವಿಧೇಯಾತ್ಮಾ ಅಂದರೆ ಇನ್ನೊಬ್ಬರಿಗೆ ಅಧೀನವಿಲ್ಲದ ಸ್ವತಂತ್ರ ಸ್ವರೂಪ. ಆದರೆ ಇಂತಹ ಭಗವಂತ ವಿಧೇಯಾತ್ಮಾ! ಏಕೆಂದರೆ ಅವನನ್ನು ಯಾರು ಭಕ್ತಿಯಿಂದ ಒಲಿಸಿಕೊಳ್ಳುತ್ತರೋ ಅವರಿಗೆ ಆತ ಅಧೀನ (ಭಕ್ತಪರಾಧೀನ).   
626) ಸತ್ಕೀರ್ತಿಃ
ನಿರ್ದಿಷ್ಟವಾದ, ದೋಷರಹಿತವಾದ ಸ್ವರೂಪ ಎಂದು ಜ್ಞಾನಿಗಳು ಯಾರನ್ನು ಗುಣಗಾನ ಮಾಡುತ್ತಾರೋ  ಅವನು ಸತ್ಕೀರ್ತಿಃ. 
627) ಛಿನ್ನಸಂಶಯಃ
ಪ್ರತಿಯೊಂದು ವಸ್ತುವಿನ ಸಮಗ್ರ ಹಾಗು ಸಾಕ್ಷಾತ್ ಜ್ಞಾನವುಳ್ಳ ಭಗವಂತನಿಗೆ ಸಂಶಯವೇ ಇಲ್ಲ.  ನಮ್ಮ ಸಂಶಯವನ್ನು ನಾಶಮಾಡುವ ಭಗವಂತ ಛಿನ್ನಸಂಶಯಃ.

No comments:

Post a Comment