Thursday, November 18, 2010

Vishnu sahasranama 591-595

ವಿಷ್ಣು ಸಹಸ್ರನಾಮ: ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ
591) ಶುಭಾಂಗಃ
ಮಂಗಳಕರವಾದ ಅಂಗಾಂಗಗಳುಳ್ಳವನು ಹಾಗು ಆನಂದಮಯವಾದ ಬೆಳಕಿನ ರೂಪ ಭಗವಂತ ಶುಭಾಂಗಃ. ಸಮಷ್ಟಿಯಾಗಿ ಆತನ ಇಡೀ ದೇಹ ಆನಂದಮಯವಾದ ಬೆಳಕಿನ ಮಾಂಗಲಿಕ ರೂಪ. ಆತ ನಮ್ಮೊಳಗಿರುವ ತನಕ ನಮ್ಮ ದೇಹ ಮಂಗಳ (ಶಿವ). ಆತ ಹೊರಟು ಹೋದ ಮೇಲೆ ಶವ! ಆತನ ಸನ್ನಿಧಾನವಿಲ್ಲದ ದೇಹ ಅಮಂಗಳ.
'ಶುಭಾಂಗ' ಇಲ್ಲಿ 'ಶು' ಎಂದರೆ ಸುಖಸ್ವರೂಪ, 'ಭ' ಎಂದರೆ ಬೆಳಕಿನಪುಂಜ. ಕತ್ತಲು ಹಾಗು ದುಃಖದ ಸ್ಪರ್ಶವೇ ಇಲ್ಲದ ಆನಂದಮಯ ಅವಯವಗಳುಳ್ಳ ಜ್ಯೋತಿರ್ಮಯ ಭಗವಂತ ಶುಭಾಂಗಃ. 
592) ಶಾಂತಿದಃ
ಮೋಕ್ಷವನ್ನು, ಅಜ್ಞಾನದ ಸ್ಪರ್ಶವಿಲ್ಲದ ಪರಿಪೂರ್ಣ ಆನಂದವನ್ನು ಕೊಟ್ಟು ನಮ್ಮನ್ನು ಸಂಸಾರ ಬಂಧದಿಂದ ಬಿಡಿಸುವ ಭಗವಂತ ಶಾಂತಿದಃ
593) ಸ್ರಷ್ಟಾ
ಸೂಕ್ಷ್ಮ ರೂಪಿ ಪರಮಾಣುಗಳ ಪುಂಜದಿಂದ ಸ್ಥೂಲ ರೂಪದ ಈ ಪ್ರಪಂಚವನ್ನು ಸೃಷ್ಟಿಸಿದ ಭಗವಂತ ಸ್ರಷ್ಟಾ.
594) ಕುಮುದಃ
'ಮುದ' ಅಂದರೆ ಆನಂದ; 'ಕು' ಎಂದರೆ ಭೂಮಂಡಲ. ಭೂಮಿಗೆ ಆನಂದವನ್ನು ಕೊಡುವುದಕ್ಕೋಸ್ಕರ ಇಳಿದು ಬಂದ ಭಗವಂತ ಕುಮುದಃ
595) ಕುವಲೇಶಯಃ
'ಕು' ಎಂದರೆ ಭೂಮಿ, 'ವಲ' ಎಂದರೆ ಹರಿಯುವುದು. ಪಂಚಭೂತಗಳಲ್ಲಿ ಹರಿಯುವುದು ನೀರು, ಆದ್ದರಿಂದ 'ಕುವಲ' ಎಂದರೆ ನೀರು. ಕುವ
ಲೇಶಯ ಎಂದರೆ ನೀರಿನಲ್ಲಿ ಮಲಗಿದವನು. ಇಲ್ಲಿ 'ನೀರು' ಎಂದರೆ ಸೂಕ್ಷ್ಮ ರೂಪಿ ಪ್ರಳಯ ಸಮುದ್ರ. ಇಂತಹ ಸೂಕ್ಷ್ಮ ಪ್ರಪಂಚದಲ್ಲಿ ಮಲಗಿದ ಭಗವಂತ ಕುವಲೇಶಯಃ. 

No comments:

Post a Comment